BJP: 'ಕಾಂಗ್ರೆಸ್‌ಗೆ ಕಾಡುತ್ತಿವೆಯಂತೆ ನಾಲ್ಕು ಶಾಪಗಳು'

ಕಾಂಗ್ರೆಸ್ ಪಕ್ಷಕ್ಕೆ ಒಂದಲ್ಲಾ ನಾಲ್ಕು ಶಾಪಗಳಿರುವ ಕಾರಣ ಇಂದು ಕಾಂಗ್ರೆಸ್ ನಾಯಕರಲ್ಲಿ ನಾಯಕತ್ವದ ಕಿತ್ತಾಟ ಆರಂಭವಾಗಿದ್ದು, ಪಕ್ಷದ ವರ್ಚಸ್ಸು ದಿನದಿಂದ ದಿನಕ್ಕೆ ನೆಲಕಚ್ಚುತ್ತಿದೆ.

Last Updated : Jan 10, 2021, 07:44 PM IST
  • ಕಾಂಗ್ರೆಸ್ ಪಕ್ಷಕ್ಕೆ ಒಂದಲ್ಲಾ ನಾಲ್ಕು ಶಾಪಗಳಿರುವ ಕಾರಣ ಇಂದು ಕಾಂಗ್ರೆಸ್ ನಾಯಕರಲ್ಲಿ ನಾಯಕತ್ವದ ಕಿತ್ತಾಟ ಆರಂಭವಾಗಿದ್ದು, ಪಕ್ಷದ ವರ್ಚಸ್ಸು ದಿನದಿಂದ ದಿನಕ್ಕೆ ನೆಲಕಚ್ಚುತ್ತಿದೆ.
  • ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಅರಬ್ಬಿ ಸಮುದ್ರ ಸೇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
  • ಆರಂಭದಲ್ಲಿ ಕಾಂಗ್ರೆಸ್ ಆಕಳು ಮತು ಕರುವಿನ ಚಿಹ್ನೆ ಹೊಂದಿತ್ತು. ಈ ಕಾರಣದಿಂದ ದೇಶದಲ್ಲಿ ಅಧಿಕಾರಕ್ಕೆ ಬಂತು. ನಂತರ ಕಾಂಗ್ರೆಸ್ ಗೋರಕ್ಷಣೆಯನ್ನು ಮರೆತರು
BJP: 'ಕಾಂಗ್ರೆಸ್‌ಗೆ ಕಾಡುತ್ತಿವೆಯಂತೆ ನಾಲ್ಕು ಶಾಪಗಳು' title=

ದಾವಣಗೆರೆ: ಕಾಂಗ್ರೆಸ್ ಪಕ್ಷಕ್ಕೆ ಒಂದಲ್ಲಾ ನಾಲ್ಕು ಶಾಪಗಳಿರುವ ಕಾರಣ ಇಂದು ಕಾಂಗ್ರೆಸ್ ನಾಯಕರಲ್ಲಿ ನಾಯಕತ್ವದ ಕಿತ್ತಾಟ ಆರಂಭವಾಗಿದ್ದು, ಪಕ್ಷದ ವರ್ಚಸ್ಸು ದಿನದಿಂದ ದಿನಕ್ಕೆ ನೆಲಕಚ್ಚುತ್ತಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಅರಬ್ಬಿ ಸಮುದ್ರ ಸೇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.

ಪಟ್ಟಣದಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ(BJP) ಬೆಂಬಲಿತ ಗೆದ್ದ-ಸೋತ ಅಭ್ಯರ್ಥಿಗಳಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧೀಜಿ, ದೇಶದ ಸಂವಿಧಾನ ನಿರ್ಮಾತೃ ಡಾ.ಬಿ.ಆರ್. ಅಂಬೇಡ್ಕರ್, ಗೋಮಾತೆ ಹಾಗೂ ಭಾರತ ಮಾತೆಯ ಶಾಪವಿದೆ ಎಂದರು.

Laxmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್​ಗೆ 'ಬಿಗ್ ಶಾಕ್​' ನೀಡಲು ರಮೇಶ್​ ಜಾರಕಿಹೊಳಿ 'ಮೆಗಾ ಪ್ಲಾನ್'..!

ಕಾಂಗ್ರೆಸ್‌ಮೊದಲು ಚಿಹ್ನೆ ಆಕಳು ಮತ್ತು ಕರು': ಆರಂಭದಲ್ಲಿ ಕಾಂಗ್ರೆಸ್ ಆಕಳು ಮತು ಕರುವಿನ ಚಿಹ್ನೆ ಹೊಂದಿತ್ತು. ಈ ಕಾರಣದಿಂದ ದೇಶದಲ್ಲಿ ಅಧಿಕಾರಕ್ಕೆ ಬಂತು. ನಂತರ ಕಾಂಗ್ರೆಸ್ ಗೋರಕ್ಷಣೆಯನ್ನು ಮರೆತರು. ಗೋವಿನ ಶಾಪವೂ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ. ಶಾಸಕ ಎಂ.ಪಿ. ರೇಣುಕಾಚಾರ್ಯ, ಸಚಿವ ಬೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ್ ಅಭಿವೃದ್ಧಿ ಪಥದ ರೂವಾರಿಗಳು ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಮನೆಯಲ್ಲಿ ಕಾರು ನಿಲ್ಲಿಸಲು ಜಾಗವಿಲ್ಲದಿದ್ದಾಗ ವ್ಯಕ್ತಿಯೊಬ್ಬ ಕಂಡುಕೊಂಡ ಪರಿಹಾರವೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News